Thursday, November 16, 2006

ಮಸಾಲೆ ದೋಸೆ...

ಗಮ ಗಮ ಪರಿಮಳ ಬೀರುತ ದೂರದಿ ಹುಸಿನಗೆ ತೋರುವ ದೋಸೆ,
ನಾಲಿಗೆ ತುದಿಯಲಿ ಕರಗುತ ಕುಣಿಯುವ ನಿನ್ನನು ಕಂಡರೆ ಎನಗಾಸೆ. |ಪ|

ಜೀವನವೆಂಬ ತಟ್ಟೆಯ ಮಧ್ಯದಿ,
ಆಕಾಂಶೆಯೆಂಬ ಚಟ್ನಿಯ ಪಕ್ಕದಿ,
ಉಪಕಾರದ ಸಾರದ ಸಾರಿನ ಜೊತೆಯಲಿ,
ಉತ್ತೇಜನವೆಂಬಾ ದೋಸೆ, ನಿನ್ನನು ಕಂಡರೆ ಎನಗಾಸೆ.

ಬಿಸಿ ಬಿಸಿ ದೋಸೆಯ ಬಾಳಲಿ ತಿಂದು,
ಮನಸಿನ ಧ್ಯೇಯದ ಹೊಟ್ಟೆಯ ತುಂಬಿಸಿ ದಿನ ದಿನ ಹೀಗೇ ನಡಿಯುತಿರೆ,
ತಟ್ಟೆಯು ಖಾಲಿ ಆಗುವುದು, ಬೆಣ್ಣೆಯ ಕಂಪು ಉಳಿಯುವುದು.
ತಿನ್ನಲು ಮರೆತು ತಟ್ಟೇಲಿ ಬಿಟ್ಟರೆ,
ದೋಸೆಯು ಅಲ್ಲೇ ಹಳಸುವುದು,
ಜೀವನ ವ್ಯರ್ಥ ಆಗುವುದು.

-- ದೇವದತ್ತ ದ್ವಾರ್ಕಾನಾಥ್ ಘಟ್

No comments: